ಸೆಪ್ಟೆಂಬರ್ 5, 2026
ಶನಿವಾರ

ನಮ್ಮನ್ನು ಅನುಸರಿಸಿ

Uttara-Kannada

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Pakka News Web • 3 ಸೆಪ್ಟೆಂ 2026,

ಕಾರವಾರ:ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನೀಡಲಾಗುವ 2026-27ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು (ಕಾರವಾರ ಶೈಕ್ಷಣಿಕ ಜಿಲ್ಲೆ) ಅಧಿಕೃತವಾಗಿ ಪ್ರಕಟಿಸಲಾಗಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಒಟ್ಟು 15 ಸಾಧಕ ಶಿಕ್ಷಕರು ಈ ಬಾರಿಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ:

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ಕೋಡಿಬಾಗ ನಂ-2 ಶಾಲೆಯ ವಿಶಾಂತ ನಾಯ್ಕ, ಅಂಕೋಲಾ ಮಳಗಾವ ಶಾಲೆಯ ರಮೇಶ ಕೇಶವ ಹೆಗಡೆ, ಕುಮಟಾ ನೆಹರುನಗರ ಶಾಲೆಯ ಶೈಲಾ ದಿನಕರ ನಾಯ್ಕ, ಹೊನ್ನಾವರ ಖಂಡೋಡಿ ಶಾಲೆಯ ಲಕ್ಷ್ಮಣ ಮಂಜುನಾಥ ಪಟಗಾರ ಹಾಗೂ ಭಟ್ಕಳ ಬಬ್ಬನಕಲ್ ಶಾಲೆಯ ಯಶವಂತ ಆರ್. ನಾಯ್ಕ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿಶಾಂತ ನಾಯ್ಕ
ರಮೇಶ ಹೆಗಡೆ
ಶೈಲಾ ನಾಯ್ಕ
ಲಕ್ಷ್ಮಣ ಪಠಗಾರ
ಯಶವಂತ ನಾಯ್ಕ

ಹಿರಿಯ ಪ್ರಾಥಮಿಕ ಶಾಲಾ ವಿಭಾಗ:

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರ ಕೋಡಿಬಾಗ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಶೋಭಾ ಆರ್. ಕಾಮತ, ಅಂಕೋಲಾ ಗುಂಡಬಾಳ ಶಾಲೆಯ ಶೋಭಾ ಸಣ್ಣಪ್ಪ ನಾಯಕ, ಕುಮಟಾ ಗುಡಿಗಾರಗಲ್ಲಿ ಮಾದರಿ ಶಾಲೆಯ ರಾಮಚಂದ್ರ ಸುಬ್ರಾಯ ಶೆಟ್ಟಿ, ಹೊನ್ನಾವರ ಸಂಕಿ ಶಾಲೆಯ ಸಾಲ್ವದೋರ್ ಮಿಂಗ್ಲಿ ಲೋಪಿಸ್ ಮತ್ತು ಭಟ್ಕಳ ಮುಡಿಕೇರಿ ಶಾಲೆಯ ಮಾದೇವಿ ಟಿ. ಹರಿಕಾಂತ್ ಅವರು ಜಿಲ್ಲಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಶೋಭಾ ಕಾಮತ್
ಶೋಭಾ ನಾಯಕ
ರಾಮಚಂದ್ರ‌‌ ಶೆಟ್ಟಿ
ಎಸ್.‌ಎಂ. ಲೋಪಿಸ್
ಮಾದೇವಿ ಹರಿಕಾಂತ

ಪ್ರೌಢ ಶಾಲಾ ವಿಭಾಗ:

ಪ್ರೌಢಶಾಲಾ ವಿಭಾಗದಲ್ಲಿ ಕಾರವಾರ ಆಸ್ನೋಟಿಯ ಶಿವಾಜಿ ವಿದ್ಯಾಮಂದಿರದ ಸಂತೋಷ ಭರಮಾಣಿ ಕಾಂಬಳೆ, ಅಂಕೋಲಾ ಅವರ್ಸಾದ ಶ್ರೀ ಕಾತ್ಯಾಯಿನಿ ಪ್ರೌಢಶಾಲೆಯ ವಿನಾಯಕ ನಾಯಕ, ಕುಮಟಾ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ನ ರಾಮಕೃಷ್ಣ ಎನ್. ನಾಯಕ, ಹೊನ್ನಾವರ ಚಿತ್ತಾರ ಸರ್ಕಾರಿ ಪ್ರೌಢ ಶಾಲೆಯ ಭಾರತಿ ಆನಂದು ಶಾನಭಾಗ ಹಾಗೂ ಭಟ್ಕಳ ಬೆಳಕೆ ಸರ್ಕಾರಿ ಪ್ರೌಢಶಾಲೆಯ ಪ್ರಕಾಶ ಮಾಧವ ಶಿರಾಲ ಅವರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂತೋಷ ಕಾಂಬಳೆ
ವಿನಾಯಕ ನಾಯಕ
ಪ್ರಕಾಶ ಶಿರಾಲಿ
ಎನ್. ರಾಮು


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250
ಪ್ರಚಾರ M48
ಜಾಹೀರಾತು ಸ್ಥಳ ಲಭ್ಯವಿದೆ
336x280