ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಕಾಳಿ ನದಿ ದಡದ ಮರಳು ಅಡ್ಡೆಯ ಮೇಲೆ ಅಧಿಕಾರಿಗಳ ದಾಳಿ: ಮರಳು ಜಪ್ತಿ!

Pakka News Web • 2 ಜುಲೈ 2026,

ಕಾರವಾರ: ಜಿಲ್ಲೆಯ ಪ್ರಕೃತಿ ಒಡಲಿನ ಜೀವನಾಡಿ ಕಾಳಿನದಿ ತೀರದಲ್ಲಿ ದೀರ್ಘಕಾಲದಿಂದ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕೊನೆಗೂ ಪೊಲೀಸ್ ಇಲಾಖೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ.

ಕಾರವಾರ ನಗರದ ನಂದನಗದ್ದಾ–ಸುಕೇರಿ ಭಾಗದ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಬೆನ್ನತ್ತಿದ ಪೊಲೀಸರು, ದಾಳಿ ನಡೆಸಿ ಇಡೀ ಕಾರ್ಯಾಚರಣೆಯಲ್ಲಿ ಬರೋಬ್ಬರಿ 18 ಕ್ಯೂಬಿಕ್ ಮೀಟರ್‌ಗೂ ಅಧಿಕ ಪ್ರಮಾಣದ ಅಕ್ರಮ ಮರಳನ್ನು ವಶಪಡಿಸಿಕೊಳ್ಳುವಲ್ಲಿ ಜಾಗೃತ ಪೊಲೀಸ್ ಪಡೆ ಯಶಸ್ವಿಯಾಗಿದೆ.

ಖಾಕಿ ಪಡೆಯ ಈ ಆಪರೇಶನ್ ಕೇವಲ ದಾಳಿಗೆ ಸೀಮಿತವಾಗದೆ, ವಶಪಡಿಸಿಕೊಂಡ ಮರಳನ್ನು ತಕ್ಷಣವೇ ಭೂ ಮತ್ತು ಗಣಿ ಇಲಾಖೆಗೆ ಹಸ್ತಾಂತರಿಸುವ ಮೂಲಕ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಸದ್ಯ ಈ ಮರಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಕಾಮಗಾರಿಗೆ ಬಳಸಲು ಗಣಿ ಇಲಾಖೆ ಮುನ್ನಡೆ ನೀಡಿರುವುದು ಇಲಾಖೆಯ ಸಮಯಪ್ರಜ್ಞೆಗೆ ಸಾಕ್ಷಿಯಾಗಿದೆ.

ಸದ್ಯದ ಮಳೆಗಾಲದ ಸನ್ನಿವೇಶವನ್ನು ಬಂಡವಾಳ ಮಾಡಿಕೊಂಡು ಅಕ್ರಮ ದಂಧೆಕೋರರು ಮತ್ತೆ ತಲೆಯೆತ್ತದಂತೆ ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳು ನದಿ ತೀರದ ಮೇಲೆ ನಿರಂತರ ನಿಗಾ ವಹಿಸಬೇಕಿದೆ. ಇದರ ಜೊತೆಯಲ್ಲೇ, ಕಳ್ಳಮಾರ್ಗದ ಮರಳು ದಂಧೆಯನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೆಸೆಯಬೇಕಾದರೆ, ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕಾನೂನುಬದ್ಧವಾಗಿ ಅಧಿಕೃತ ಮರಳು ಸಿಗುವಂತಹ ಪಾರದರ್ಶಕ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬೇಕು ಎಂಬ ಬಲವಾದ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250