ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ತಲೆಮರಿಸಿಕೊಂಡಿದ್ದ ಆರೋಪಿ ಪೊಲೀಸರ ಜಾಲಕ್ಕೆ!

Pakka News Web • 3 ಜುಲೈ 2026,

ಶಿರಸಿ ನಗರದಲ್ಲಿ ಸುಮಾರು ಒಂದು ದಶಕದ ಹಿಂದೆ ಸರಣಿ ಮನೆಕಳ್ಳತನ ನಡೆಸಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನಲ್ಲಿ ಅಡಗಿದ್ದ ಆರೋಪಿಯೊಬ್ಬ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದಾಂಡೇಲಿಯ ಪೇಪರ್ ಮಿಲ್ ಕ್ವಾರ್ಟರ್ಸ್ ನಿವಾಸಿಯಾದ 38 ವರ್ಷದ ಸುಲ್ತಾನ್ (ಬುಡ್ಯಾ) ಹುಸೇನ್ ಸಾಬ್ ನದಾಫ್ ಆರೋಪಿ.

2016-17ರ ಅವಧಿಯಲ್ಲಿ ಶಿರಸಿ ನಗರ, ಮಾರುಕಟ್ಟೆ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ಕೈಚಳಕ ಜೋರಾಗಿಯೇ ಇತ್ತು. ಪ್ರಕರಣ ದಾಖಲಾದ ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ಪತ್ತೆಗೆ ಕೋರ್ಟ್ ವಾರಂಟ್ ಕೂಡ ಜಾರಿ ಮಾಡಿತ್ತು. ಪೊಲೀಸರ ಕಣ್ಣು ತಪ್ಪಿಸಿ ಬೆಂಗಳೂರಿನಲ್ಲಿ ಆಶ್ರಯ ಪಡೆದಿದ್ದ ಈತನ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಶಿರಸಿ ಪೊಲೀಸರು ರಾಜಧಾನಿಗೆ ಲಗ್ಗೆ ಇಟ್ಟಿದ್ದಾರೆ. ಅಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿಕಟ್ಟಿ ತಂದು ಶುಕ್ರವಾರ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ.

ಡಿ.ಎಸ್.ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸಂಪತ್ ಇ.ಸಿ. ಅವರ ತೀಕ್ಷ್ಣ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಗಳಾದ ನರಸಿಂಹಲು ಟಿ ಮತ್ತು ನಾರಾಯಣ ರಾಥೋಡ್ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ಅಚ್ಚುಕಟ್ಟಾಗಿ ಮುಗಿಸಿದೆ. ತಂಡದಲ್ಲಿದ್ದ ಎಎಸ್‌ಐ ನೆಲ್ಸನ್ ಮೆಂಥರೋ ಹಾಗೂ ಸಿಬ್ಬಂದಿಗಳಾದ ರಾಮಯ್ಯ ಪೂಜಾರಿ, ಸದ್ದಾಂ ಹುಸೇನ್, ಈರಣ್ಣ, ಹನುಮಂತ ಮಾಕಾಪುರ ಮತ್ತು ಚನ್ನಪ್ಪ ಅವರ ಚಾಣಾಕ್ಷತನದಿಂದಾಗಿ ಹತ್ತು ವರ್ಷಗಳ ಹಳೆಯ ಕೇಸ್‌ಗೆ ಸದ್ಯ ದೊಡ್ಡ ಬ್ರೇಕ್ ಸಿಕ್ಕಂತಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250