ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Trending

ಉತ್ತರ ಕನ್ನಡದ ಈ ತಾಲೂಕು ಬರಪೀಡಿತ!

Pakka News Web • 27 ಆಗಸ್ಟ್ 2026,

ಕಾರವಾರ: ವಾಡಿಕೆ ಮಳೆ ಕೈಕೊಟ್ಟ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿದೆ.

ಜೂನ್‌ 1ರಿಂದ ಆಗಸ್ಟ್‌ 26ರವರೆಗೆ ರಾಜ್ಯದಲ್ಲಿ ವಾಡಿಕೆಯ 666 ಮಿ.ಮೀ. ಮಳೆಗೆ ಬದಲಾಗಿ 465 ಮಿ.ಮೀ. ಮಾತ್ರ ದಾಖಲಾಗಿದ್ದು, ಶೇ.30ರಷ್ಟು ಕೊರತೆ ಉಂಟಾಗಿದೆ. ಇದರ ಪರಿಣಾಮ ಉತ್ತರ ಕನ್ನಡದಲ್ಲಿಯೂ ಬಿತ್ತನೆ ಕಾರ್ಯ ಹಿನ್ನಡೆ ಕಂಡಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 58,546 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದರೂ, ಜುಲೈ ಅಂತ್ಯದ ವೇಳೆಗೆ 43,078 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಭತ್ತದ ಬಿತ್ತನೆಯೂ ನಿರೀಕ್ಷಿತ ಮಟ್ಟ ತಲುಪಿಲ್ಲ.

ಬನವಾಸಿ, ಮುಂಡಗೋಡ ಹಾಗೂ ಯಲ್ಲಾಪುರ ಭಾಗದಲ್ಲಿ ಅಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರಿಗೆ ಬಳಿಕ ಮಳೆ ಕೈಕೊಟ್ಟಿರುವುದು ಆತಂಕ ಮೂಡಿಸಿದೆ. ಮೊಳಕೆಯೊಡೆದ ಬೆಳೆಗಳಿಗೂ ತೇವಾಂಶದ ಕೊರತೆ ಎದುರಾಗಿದೆ.

ಮಳೆ ಕೊರತೆ ಮುಂದುವರಿದರೆ ಕೃಷಿ ಹಾಗೂ ಜಲಮೂಲಗಳ ಮೇಲೆ ಮತ್ತಷ್ಟು ಒತ್ತಡ ಬೀಳುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಸುರಿಯುವ ಮಳೆಯೇ ಜಿಲ್ಲೆಯ ಕೃಷಿ ಪರಿಸ್ಥಿತಿಗೆ ನಿರ್ಣಾಯಕವಾಗಲಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250