ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಕಾಜುಬಾಗ್‌ದ ಯುವಕ ಕಾಣೆ: ಪತ್ತೆಯಾದರೆ ಪೊಲೀಸರಿಗೆ ಮಾಹಿತಿ ನೀಡಿ 

Pakka News Web • 16 ಜೂನ್ 2026,

ಕಾರವಾರ: ಇಲ್ಲಿನ ಕಾಜುಬಾಗ್‌ದ ಸಂಕೇತ ಹೋಟೆಲ್ ಕಟ್ಟಡದಲ್ಲಿ ವಾಸವಿದ್ದ 26 ವರ್ಷದ ಸಫ್ರರಾಜ ಅಲಿ ಅಹಮ್ಮದ ಎಂಬ ಯುವಕ ಕಾಣೆಯಾಗಿದ್ದಾನೆ. ಜೂನ್ 14ರಂದು ಸಂಜೆ 4 ಗಂಟೆಗೆ ಮನೆಯಿಂದ ಹೊರಟವನು ಮರಳಿ ಬಂದಿಲ್ಲ. ಈ ಕುರಿತು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗಾಗಿ ಸಾರ್ವಜನಿಕರ ಸಹಾಯ ಕೋರಲಾಗಿದೆ.

ಕಾಣೆಯಾದ ಯುವಕನ ಚಹರೆ ಮತ್ತು ವಿವರ: ಕಾಣೆಯಾದ ಸಫ್ರರಾಜ ಅಲಿ ಅಹಮ್ಮದ 5.6 ಅಡಿ ಎತ್ತರವಿದ್ದು, ಗೋಧಿ ವರ್ಣ, ಸಾಧಾರಣ ತೆಳ್ಳನೆಯ ಮೈಕಟ್ಟು ಹಾಗೂ ದುಂಡನೆಯ ಮುಖವನ್ನು ಹೊಂದಿದ್ದಾನೆ. ಮನೆಯಿಂದ ಹೊರಡುವಾಗ ಆತ ನೀಲಿ ಬಣ್ಣದ ಅರ್ಧ ತೋಳಿನ (ಆಫ್ ತೋಳು) ಶರ್ಟ್ ಮತ್ತು ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ಈತನಿಗೆ ಕನ್ನಡ, ಹಿಂದಿ, ಇಂಗ್ಲಿಷ್, ಕೊಂಕಣಿ ಹಾಗೂ ಅಸ್ಸಾಮಿ ಭಾಷೆಗಳು ಮಾತನಾಡಲು ಬರುತ್ತವೆ.ಈ ಚಹರೆಯುಳ್ಳ ಯುವಕನ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ತಕ್ಷಣ ಕಾರವಾರ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಸಹಕರಿಸಬೇಕಾಗಿ ತನಿಖಾಧಿಕಾರಿಗಳು ವಿನಂತಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250