ಹಳಿಯಾಳ ನಗರದ ಗೌಳಿಗಲ್ಲಿಯ ನಿವಾಸಿ ಪರಶುರಾಮ ರಾಮಣ್ಣ ಅರಬೇಡರ (44) ಎಂಬುವವರು ಆಗಸ್ಟ್ 24 ರಿಂದ ಯಾರಿಗೂ ತಿಳಿಸದೆ ಮನೆಯಿಂದ ತೆರಳಿ ನಾಪತ್ತೆಯಾಗಿದ್ದಾರೆ.ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಉದ್ದ ಮುಖದ ಲಕ್ಷಣ ಹೊಂದಿರುವ ಇವರು ಮನೆಯಿಂದ ಹೊರಡುವಾಗ ಹಳದಿ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಇವರಿಗೆ ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಮಾತನಾಡಲು ಬರುತ್ತದೆ.
ಈ ಚಹರೆಯ ವ್ಯಕ್ತಿ ಎಲ್ಲಾದರೂ ಕಂಡುಬಂದಲ್ಲಿ ಅಥವಾ ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಕೂಡಲೇ ಹಳಿಯಾಳ ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆಗಳಾದ 9480805265 ಅಥವಾ 8277988460 ಅನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
