ಉತ್ತರ ಕನ್ನಡ ಹೊನ್ನಾವರ ತಾಲೂಕಿನ ಗೇರುಸೊಪ್ಪ ಶಾಖೆಯ ಉಪ್ಪೋಣಿ ಫೀಡರ್ 11 ಕೆ.ವಿ ಮಾರ್ಗದ ನಿರ್ವಹಣೆ ನಿಮ್ಮಿತ್ತ ಉಪ್ಪೋಣಿ ಫೀಡರ್ ವ್ಯಾಪ್ತಿಯಲ್ಲಿ ಸೆ.23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಹೊನ್ನಾವರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ ಕಾರವಾರ ಹೆಸ್ಕಾಂ, ಉಪವಿಭಾಗ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ಸೆ.23 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೇಲಂಗರೋಡ ಫೀಡರಿನ್ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲ್ಲಿದೆ.
ವಿದ್ಯುತ್ ವ್ಯತ್ಯಯ ಹೆಸ್ಕಾಂ, ಕುಮಟಾ ಉಪವಿಭಾಗದ ವಿವಿಧ ಕಡೆಗಳಲ್ಲಿ ಸೆ. 23ರಂದು ವಿದ್ಯುತ್ ಕಡಿತವಾಗಲಿದೆ.
ನಗರ ಶಾಖೆಯ 11ಕೆ.ವಿ ಕುಮಟಾ ಟೌನ್ ಮತ್ತು ಗ್ರಾಮೀಣ ಶಾಖೆಯ 11ಕೆ.ವಿ ಧಾರೆಶ್ವರ ಮಾರ್ಗದ ರಾಷ್ಟೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿಯಲ್ಲಿ 11ಕೆ.ವಿ ಮಾರ್ಗ ಸ್ಥಳಾಂತರ ಕಾಮಗಾರಿ ಇರುವುದರಿಂದ ಸೆ.23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹಾಗೂ 33ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗರಿ ಇರುವುದರಿಂದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಗಂಗಾವಳಿ, ಬಿಜ್ಜೂರ, ಓಂ ಬೀಚ್ ಮಾರ್ಗದ ಎಲ್ಲಾ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
