ಮುಂಡಗೋಡ: ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನ್ಯಾಯಾಲಯದ ಆದೇಶ ಹಾಗೂ ಉನ್ನತಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಬುಧವಾರ ಮುಂಜಾನೆ 7 ಗಂಟೆಗೆ ಏಕಕಾಲದಲ್ಲಿ ತಾಲೂಕಿನ ರೌಡಿ ಆಸಾಮಿಗಳು ಹಾಗೂ ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ಮನೆಗಳ ಮೇಲೆ ಶೋಧನೆ ನಡೆಸಲಾಗಿದೆ.
ಮುಂಡಗೋಡ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ನಡೆದ ಈ ಹಠಾತ್ ದಾಳಿಯಲ್ಲಿ ತಾಲೂಕಿನಾದ್ಯಂತ ಸಕ್ರಿಯರಾಗಿರುವ ಒಟ್ಟು 14 ರೌಡಿ ಆಸಾಮಿಗಳ ಮನೆಗಳನ್ನು ಸಂಪೂರ್ಣವಾಗಿ ತಪಾಸಣೆಗೊಳಪಡಿಸಲಾಯಿತು.

ತಾಲ್ಲೂಕಿನ ರೌಡಿ ಆಸಾಮಿಗಳಾದ ಕಿರಣ ಪ್ರಕಾಶ ಸೋಳಂಕಿ (29) ಆನಂದ ನಗರ, ಮಂಜು ಅರ್ಜುನ ನವಲೆ (28) ಗಾಂಧಿನಗರ, ಮಲ್ಲಿಕಜಾನ @ ಜಹೀರ ಶಕ್ಷೀರ ಶೇಖ (28) ಕಿಲ್ಲೇ ಓಣಿ, ಮಹಮ್ಮದ ಸಾದೀಕ್ ಮೋದಿನಸಾಬ ಗಾಜೀಪೂರ (26) ಇಂದಿರಾನಗರ ಪ್ಲಾಟ್, ವಾಸಿಂಖಾನ್ ಗೂಡುಖಾನ್ ಬೆಂಡಿಗೇರಿ (30) ಆನಂದನಗರ, ಮಕ್ಖುಲಅಹಮದ ರಜಾಕಷಾ ಯಳ್ಳೂರು (39) ವಾಯ್. ಬಿ. ರೋಡ್, ಮದುಸಿಂಗ್ ಗಂಗಾರಾಮಸಿAಗ್ ರಜಪೂತ (32) ಬಸ್ಸಾಪೂರ, ಮಂಜುನಾಥ ಕಾಂತೇಶ ಹೋಟಕರ್ @ ಶೇರಖಾನೆ (26) ಕಂಬಾರಗಟ್ಟಿ ಪ್ಲಾಟ್, ಮಹಮ್ಮದ ಇಬ್ರಾಹಿಂ @ ರಫಿಕ್ ಮಕ್ಯೂಲ್ ಸಾಬ ಜಮಖಂಡಿ (30) – ಚೌಡಳ್ಳಿ, ಹರುಣ ಹಮ್ಬಮ್ ಶೇಖ್ (21) – ಕಿಲ್ಲೆ ಓಣಿ, ಮಹಮ್ಮದ ಯೂಸುಪ್ ರಿಯಾಜ್ ಅಹ್ಮದ್ ಗಡವಾಲೆ (22) – ಕಿಲ್ಲೆ ಓಣಿ, ಮಹಮ್ಮದ ಇಸ್ಮಾಯಿಲ್ ಸೈಪುದ್ದಿನ್ ಪಾನವಾಲೆ (26) – ದೇಶಪಾಂಡೆ ನಗರ, ಸಂಜು ಅರ್ಜುನ್ ನವಲೆ (29) – ಗಾಂಧೀನಗರ, ತೌಸಿಫ್ ಅಹಮದ್ ಮಹಬೂಬಸಾಬ್ ಪಣಿಬಂದ (35) – ನೆಹರೂ ನಗರ ಇವರ ಮನೆಗಳ ಮೇಲೆ ದಾಳಿ ನಡೆಸಿ ಶೋಧನೆ ನಡೆಸಲಾಗಿದೆ
ಎಂದು ಪೊಲೀಸ್ ಇಲಾಖೆಯ ಮಾಹಿತಿ ನೀಡಿದ್ದು ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೌಡಿ ಚಟುವಟಿಕೆಗಳು ಹಾಗೂ ಬಡವರ ರಕ್ತ ಹೀರುವ ಅಕ್ರಮ ಬಡ್ಡಿ ದಂಧೆಗಳ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಠಿಣ ಕಾನೂನು ಕ್ರಮಗಳು ಮುಂದುವರಿಯಲಿವೆ ಎಂದು ಪೊಲೀಸ್ ನಿರೀಕ್ಷಕರು ಎಚ್ಚರಿಸಿದ್ದಾರೆ.
