ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಶಾಲೆಯನ್ನು ಬಿಡದ ಕಳ್ಳರು: ಕಳ್ಳತನಕ್ಕೆ ವಿಫಲ ಯತ್ನ!

Pakka News Web • 6 ಜುಲೈ 2026,

ದಾಂಡೇಲಿ ನಗರದ ಬಿ.ಸಿ.ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಸುಕಿನ ವೇಳೆ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಶಾಲೆಯ ಬೀಗ ಮುರಿದು ಕಳ್ಳತನಕ್ಕೆ ಕೈಹಾಕಿದ್ದ ಖದೀಮರು, ಕೊನೆಗೆ ಬರಿಗೈಲಿ ವಾಪಸ್ಸಾದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಶಾಲೆಯ ಆವರಣಕ್ಕೆ ನುಗ್ಗಿದ ಕಳ್ಳರು ತರಗತಿ ಕೊಠಡಿಯೊಂದರ ಬೀಗವನ್ನು ಯಶಸ್ವಿಯಾಗಿ ಮುರಿದಿದ್ದಾರೆ. ಆದರೆ, ಅದು ಕೇವಲ ವಿದ್ಯಾರ್ಥಿಗಳ ತರಗತಿ ಕೊಠಡಿಯಾಗಿದ್ದರಿಂದ ಅಲ್ಲಿ ಕಳ್ಳತನ ಮಾಡಲು ಯಾವುದೇ ಬೆಲೆಬಾಳುವ ವಸ್ತುಗಳು ಸಿಕ್ಕಿಲ್ಲ. ಇದರಿಂದ ಆಚೆ ಬಂದ ಕಳ್ಳರು, ಪಕ್ಕದಲ್ಲೇ ಇದ್ದ ಬಿಸಿಯೂಟದ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡುವ ಕೊಠಡಿಯ ಬೀಗ ಮುರಿಯಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ ಆ ಕೊಠಡಿಯ ಬೀಗ ಗಟ್ಟಿಯಾಗಿದ್ದರಿಂದ ಅದನ್ನು ಮುರಿಯಲಾಗದೆ ಅಂತಿಮವಾಗಿ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ಕುರಿತು ಸೋಮವಾರ ಮಧ್ಯಾಹ್ನ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಲಾ ಮುಖ್ಯಾಧ್ಯಾಪಕ  ಜಿ.ಎನ್.ನಾಯ್ಕ ಅವರು, ಘಟನೆಯ ಸಂಪೂರ್ಣ ವಿವರವನ್ನು ಹಂಚಿಕೊಂಡಿದ್ದಾರೆ. ಸದ್ಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಗರ ಠಾಣೆಯ ಪೊಲೀಸರು ಶಾಲಾ ಆವರಣವನ್ನು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250