ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಈಜಾಟಕ್ಕೆ ತೆರಳಿದ ಯುವಕರ ದುರಂತ ಅಂತ್ಯ!

Pakka News Web • 12 ಜುಲೈ 2026,

ರವಿವಾರದ ರಜೆಯನ್ನು ಕಳೆಯಲು ಹೊಳೆಗೆ ತೆರಳಿದ್ದ ಇಬ್ಬರು ಯುವಕರಿಗೆ ನೀರಿನಲ್ಲಿ ಮುಳುಗಿ ದಾರುಣ ಅಂತ್ಯ ಕಂಡ ಘಟನೆ  ಶಿರಸಿ ತಾಲೂಕಿನ ಉಂಚಳ್ಳಿಯ ಮಾಸ್ತಿಜಡ್ಡಿ ಹೊಳೆಯಲ್ಲಿ ಸಂಭವಿಸಿದೆ. ಮೃತರನ್ನು ಮಾಸ್ತಿಜಡ್ಡಿ ಗ್ರಾಮದ ಮದನ ನಾಯ್ಕ (17) ಹಾಗೂ ಹೊನ್ನಾವರ ತಾಲೂಕಿನ ಲೋಹಿತ್ ನಾಯ್ಕ (19) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಹೊತ್ತಿಗೆ ಹೊಳೆಯಲ್ಲಿ ಈಜುತ್ತಿದ್ದ ವೇಳೆ ಇಬ್ಬರೂ ಆಳವಾದ ನೀರಿನ ಭಾಗಕ್ಕೆ ತೆರಳಿದ್ದು, ನೀರಿನ ಸೆಳೆತದಿಂದ ಹೊರಬರಲಾಗದೆ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಳಿಕ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮಾರಿಕಾಂಬಾ ಲೈಫ್ ಗಾರ್ಡ್ ತಂಡ ಸ್ಥಳಕ್ಕಾಗಮಿಸಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿತು. ಸಾಹಸಮಯ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹಗಳನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಮಾರಿಕಾಂಬಾ ಲೈಫ್ ಗಾರ್ಡ್ ತಂಡದ ಗೋಪಾಲ ಗೌಡ, ರಾಜು ಮಡಿವಾಳ, ಪ್ರದೀಪ ಎಸಳೆ, ದೀಪಕ್ ಕಾನಡೆ, ದರ್ಶನ ಕಬ್ಬೆ ಸೇರಿದಂತೆ ಹಲವು ಸಿಬ್ಬಂದಿ ಪಾಲ್ಗೊಂಡಿದ್ದರು. ಘಟನೆಗೆ ಸಂಬಂಧಿಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250