ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಇಸ್ಪೀಟ್ ಆಡುತ್ತಿದ್ದ ಐವರು ಪೊಲೀಸರ ಬಲೆಗೆ

Pakka News Web • 28 ಆಗಸ್ಟ್ 2026,

ಮುಂಡಗೋಡ: ಪಟ್ಟಣದ ಸಾರ್ವಜನಿಕ ಸ್ಥಳವೊಂದರಲ್ಲಿ ಬೆಳಗಿನ ಜಾವ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದ ಐವರ ಜುಗಾರಾಟಕ್ಕೆ ಮುಂಡಗೋಡ ಪೊಲೀಸರು ಬ್ರೇಕ್ ಹಾಕಿದ್ದಾರೆ. ದಾಳಿ ವೇಳೆ ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಳಗನಕೊಪ್ಪ ಗಣಪತಿ ದೇವಸ್ಥಾನದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ‘ಅಂದರ್-ಬಾಹರ್’ ಆಟ ನಡೆಯುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಥಳಕ್ಕೆ ತೆರಳಿ, ಹಣದ ಪಣದೊಂದಿಗೆ ಜುಗಾರಾಟದಲ್ಲಿ ತೊಡಗಿದ್ದ ಐವರನ್ನು ವಶಕ್ಕೆ ಪಡೆದಿದ್ದಾರೆ. 67೦೦ ರೂ. ಜಪ್ತಿ ಮಾಡಲಾಗಿದೆ.

ಗಾಂಧಿನಗರದ ಪರಶುರಾಮ ಕಲ್ಲಪ್ಪ ಛಲವಾದಿ, ಇಂದಿರಾನಗರದ ಅಕ್ಷರಷಾ ಅಕ್ತರಷಾ ಮಿರಾಶಿ, ಕಂಬಾರಗಟ್ಟಿ ಪ್ಲಾಟ್‌ನ ಗೌಸಮೊದ್ದೀನ ಸರವರಸಾಬ್ ಉಸ್ತಾದಿ, ಗಣೇಶ ಫಕ್ಕೀರಪ್ಪ ಲಮಾಣಿ ಹಾಗೂ ಹೊಸಓಣಿಯ ನಾಗರಾಜ ಹನುಮಂತಪ್ಪ ವಾಲ್ಮೀಕಿ ವಶಕ್ಕೆ ಪಡೆದವರು.

ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ ಹನಾಪುರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250