ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ನೇವಲ್ ಬೇಸ್‌ನಿಂದ ದಿಢೀರ್ ಮಾಯವಾದ ಯುವ ಸೇಲರ್!

Pakka News Web • 2 ಸೆಪ್ಟೆಂ 2026,

ಕಟ್ಟುನಿಟ್ಟಿನ ಭದ್ರತೆ, ಸದಾ ಕಣ್ಗಾವಲು ಇರುವ ಕಾರವಾರದ ಪ್ರತಿಷ್ಠಿತ ಅರ್ಗಾ ನೌಕಾನೆಲೆಯಿಂದ ಭಾರತೀಯ ನೌಕಾಪಡೆಯ ಯುವ ಸೇಲರ್ ಒಬ್ಬರು ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.

ಆಂಧ್ರಪ್ರದೇಶದ ಅನಂತಪುರ ಮೂಲದ 28 ವರ್ಷದ ಕುರುಬಾ ದಿನೇಶ ಕುಮಾರ ಎಂಬ ನಾವಿಕ, ಆಗಸ್ಟ್ 27ರ ಹಾಡುಹಗಲೇ (ಮಧ್ಯಾಹ್ನ 2 ಗಂಟೆಗೆ) ಕರ್ತವ್ಯದ ನೆಲೆಯಿಂದ ಹೊರಟವರು ಇಂದಿಗೂ ಸುಳಿವಿಲ್ಲದೆ ನಾಪತ್ತೆಯಾಗಿದ್ದಾರೆ.

ಈ ಯುವ ಸೈನಿಕ ಎಲ್ಲಿ ಹೋದರು, ಏನಾಯಿತು ಎಂಬುದು ಸದ್ಯ ನಿಗೂಢವಾಗಿಯೇ ಉಳಿದಿದ್ದು, ಇವರ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ತಕ್ಷಣವೇ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ (ದೂ: 08382-222443) ಮಾಹಿತಿ ನೀಡುವಂತೆ ತನಿಖಾಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250