ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಅರಬೈಲ್ ಘಟ್ಟದಲ್ಲಿ ಅಂತ್ಯವಾದ  ತಾಯಿ-ಮಗಳು ಪ್ರವಾಸ!

Pakka News Web • 7 ಸೆಪ್ಟೆಂ 2026,

ಯಲ್ಲಾಪುರ: ಪ್ರವಾಸಕ್ಕೆಂದು ಪುಣೆಯಿಂದ ಬಂದಿದ್ದ ತಾಯಿ–ಮಗಳ ಪ್ರಯಾಣ ಅರಬೈಲ್ ಘಟ್ಟದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ. 

ಎರಡು ಲಾರಿಗಳ ನಡುವೆ ಕಾರು ಸಿಲುಕಿ ಸಂಪೂರ್ಣ ನಜ್ಜುಗುಜ್ಜಾದ ಪರಿಣಾಮ ತಾಯಿ–ಮಗಳು ಮೃ*ತಪಟ್ಟಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ. ಮೃತರನ್ನು ಪುಣೆಯ ಹಡಪ್ಸರ್ ನಿವಾಸಿಗಳಾದ 59 ವರ್ಷದ ಶರ್ಮಿಳಾ ರಾಜನ್ ಕುಲ್ತೆ ಹಾಗೂ 32 ವರ್ಷದ ಮೃಣ್ಮಯಿ ರಾಜನ್ ಕುಲ್ತೆ ಎಂದು ಗುರುತಿಸಲಾಗಿದೆ.

ಹೊಸಪೇಟೆ ಮೂಲದ 55 ವರ್ಷದ ಕಾರು ಚಾಲಕ ಆಲಂಬಾಷಾ ಗಾಯಗೊಂಡಿದ್ದಾರೆ. ಬಾದಾಮಿಯ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಗೋಕರ್ಣದತ್ತ ತೆರಳುತ್ತಿದ್ದ ವೇಳೆ ರವಿವಾರ ರಾತ್ರಿ ಅರಬೈಲ್ ಘಟ್ಟದಲ್ಲಿ ಅಪಘಾತ ಸಂಭವಿಸಿದೆ. ಯಲ್ಲಾಪುರದಿಂದ ಅಂಕೋಲಾ ಕಡೆಗೆ ವೇಗವಾಗಿ ಬಂದ KA-01/AN-1281 ಸಂಖ್ಯೆಯ ಲಾರಿ, ತಾಯಿ–ಮಗಳು ಪ್ರಯಾಣಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ರಭಸಕ್ಕೆ ಕಾರು ಮುಂದಕ್ಕೆ ಚಲಿಸುತ್ತಿದ್ದ MH-09/FL-8699 ಸಂಖ್ಯೆಯ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು, ಎರಡೂ ಲಾರಿಗಳ ನಡುವೆ ಸಿಲುಕಿ ಅಪ್ಪಚ್ಚಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ತಾಯಿ–ಮಗಳನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗಮಧ್ಯೆಯೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಗಾಯಗೊಂಡ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ.

ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಆತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250