ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಪೊಲೀಸ್ ವಶದಿಂದ ಪರಾರಿಯಾಗಿದ್ದ ಆರೋಪಿಗೆ ದಂಡ: ಕೋರ್ಟ್ ಆದೇಶ

Pakka News Web • 9 ಸೆಪ್ಟೆಂ 2026,

ಕುಮಟಾ: ಪೊಲೀಸರ ವಶದಿಂದ ತಪ್ಪಿಸಿಕೊಂಡು ಓಡಿಹೋಗಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಈಶ್ವರ್ ಕಣಿಯಾ ಮುಕ್ರಿ ಶಿಕ್ಷೆಗೆ ಒಳಗಾದ ಆರೋಪಿ. ಈತ 2020ರ ಜೂನ್ 6ರ ರಾತ್ರಿ 8:30ರ ಸುಮಾರಿಗೆ ಕಾರವಾರದ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ವೇಳೆ ಪರಾರಿಯಾಗಿದ್ದ. ಹೊನ್ನಾವರ ಪೊಲೀಸರು ಆತನನ್ನು ಕರೆದೊಯ್ಯುವಾಗ ಕುಮಟಾ ಬಸ್ ನಿಲ್ದಾಣದ ಬಳಿ ಮೂತ್ರ ವಿಸರ್ಜನೆಗೆಂದು ನೆಪ ಹೇಳಿ, ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ.

ಪ್ರಕರಣದ ವಿಚಾರಣೆ ನಡೆಸಿದ ಕುಮಟಾ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ವರ್ಷ ಶ್ರೀ, ಆರೋಪಿಯ ಮೇಲಿನ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ತಪ್ಪಿದರೆ 2 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದ ಕುಮಟಾ ಪೊಲೀಸ್ ಉಪನಿರೀಕ್ಷಕ ರವಿ ಗುಡ್ಡಿ ಅವರ ವರದಿಯನ್ನು ಆಧರಿಸಿ ವಿಚಾರಣೆ ನಡೆದಿತ್ತು. ಸರ್ಕಾರದ ಪರವಾಗಿ ಹಿಂದಿನ ಸಹಾಯಕ ಸರ್ಕಾರಿ ವಕೀಲ ಅಣ್ಣಪ್ಪ ಆರ್. ನಾಯ್ಕ್ ಬಾಗಳ ಹಾಗೂ ಪ್ರಸ್ತುತ ಗಿರೀಶ ನಾಗಪ್ಪ ಪಟಗಾರ ವಾದ ಮಂಡಿಸಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250