ಭಟ್ಕಳ: ಆಟೋ ರಿಕ್ಷಾ ಬಾಡಿಗೆ ವಿಚಾರವಾಗಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಕೈಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡ ಘಟನೆ ಭಟ್ಕಳದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಈ ಸಂಬಂಧ ಸಾರ್ವಜನಿಕ ಶಾಂತಿಭಂಗ ಉಂಟುಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದ ಬಂದರ ರಸ್ತೆಯ ಮುಗ್ಧುಂ ಕಾಲೋನಿ ನಿವಾಸಿ ಮಹ್ಮದ್ ಗೌಸ್ ಸಲ್ಮಾನ್ (23) ಹಾಗೂ ಮಾವಿನಕುರ್ವೆಯ ಬೆಳ್ಳಿ ನಿವಾಸಿ, ಆಟೋ ಚಾಲಕ ಸುಭಾಷ ರಾಮದಾಸ ದೇವಾಡಿಗ (34) ಜಗಳ ಮಾಡಿಕೊಂಡವರಾಗಿದ್ದಾರೆ. ಇವರು ಹೊಸ ಬಸ್ ನಿಲ್ದಾಣದ ಸಮೀಪ ಆಟೋ ರಿಕ್ಷಾ ಬಾಡಿಗೆ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಅದು ಪರಸ್ಪರ ಹೊಡೆದಾಟಕ್ಕೆ ತಿರುಗಿದೆ.
ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ ಶಾಂತಿಭಂಗ ಉಂಟುಮಾಡಿದ ಹಿನ್ನೆಲೆಯಲ್ಲಿ ಪೊಲೀಸ್ ಉಪನಿರೀಕ್ಷಕ ತಿಮ್ಮಪ್ಪ ಎಸ್. ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಕಲಂ 194(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
