ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಹಾವು ಕಚ್ಚಿ ವಿದ್ಯಾರ್ಥಿ ಮೃತ್ಯು; ಸಹೋದರಿ ಅಪಾಯದಿಂದ ಪಾರು

Pakka News Web • 24 ಜೂನ್ 2026,

ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ವಿಷಪೂರಿತ ಹಾವು ಕಚ್ಚಿ ಆರನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಪುಟ್ಟಪ್ಪ ನಾಯ್ಕ ಎಂಬುವವರ ಪುತ್ರ ಮಿಥುನ್ ಪುಟ್ಟಪ್ಪ ನಾಯ್ಕ (12) ಹಾವಿನ ಕಡಿತಕ್ಕೆ ಬಲಿಯಾದ ದುರ್ದೈವಿ. ಘಟನೆಯಲ್ಲಿ ಮಿಥುನ್ ಸಹೋದರಿ ದೀಕ್ಷಾ ಅವರಿಗೂ ಹಾವು ಕಚ್ಚಿದ್ದು, ಸಕಾಲದಲ್ಲಿ ದೊರೆತ ತುರ್ತು ಚಿಕಿತ್ಸೆಯಿಂದಾಗಿ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಂಗಳವಾರ ತಡ ರಾತ್ರಿ ಎಂದಿನಂತೆ ಪೋಷಕರ ಜೊತೆ ಮಲಗಿದ್ದ ಮಕ್ಕಳಿಗೆ ಬೆಳಗಿನ ಜಾವದ ಸುಮಾರಿಗೆ ಹಾವು ಕಚ್ಚಿದೆ. ಮಕ್ಕಳು ಏಕಾಏಕಿ ವಾಂತಿ ಮಾಡಲು ಆರಂಭಿಸಿದಾಗ ಪೋಷಕರು ಎಚ್ಚರಗೊಂಡು ನೋಡಿದ್ದಾರೆ. ಈ ವೇಳೆ ಮನೆಯಿಂದ ಹಾವೊಂದು ಹೊರಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಪೋಷಕರು ಸ್ಥಳೀಯರ ನೆರವಿನೊಂದಿಗೆ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ತೀವ್ರವಾಗಿ ವಿಷವೇರಿದ್ದರಿಂದ ಮಿಥುನ್ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ದೀಕ್ಷಾ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

ಆಟ ಆಡಿಕೊಂಡಿರಬೇಕಾದ ಕಿರಿಯ ವಯಸ್ಸಿನ ವಿದ್ಯಾರ್ಥಿ ಮಿಥುನ್, ವಿಷಪೂರಿತ ಹಾವಿನ ಕಡಿತಕ್ಕೆ ಬಲಿಯಾಗಿರುವುದು ಸಹಸ್ರಳ್ಳಿ ಗ್ರಾಮದಲ್ಲಿ ತೀವ್ರ ಶೋಕ ಮೂಡಿಸಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250