Rukmini Vasanth: ರುಕ್ಮಿಣಿ ವಸಂತ್ ಕನ್ನಡದ ಸ್ಟಾರ್ ನಟಿ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳ ಬಳಿಕ ರುಕ್ಮಿಣಿ ವಸಂತ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಈಗಾಗಲೇ ನಟಿಸಿರುವ ರುಕ್ಮಿಣಿ ವಸಂತ್, ಹಿಂದಿ ಸಿನಿಮಾ ಒಂದರ ಬಗ್ಗೆಯೂ ಮಾತುಕತೆ ಮಾಡಿದ್ದರು. ತೆಲುಗಿನ ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ ಸಿನಿಮಾನಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್, ಜೂ ಎನ್ಟಿಆರ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ನಡುವೆ ಇದೀಗ ಮತ್ತೊಬ್ಬ ಟಾಲಿವುಡ್ ಸ್ಟಾರ್ ಹೀರೋ ಅವರ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ರುಕ್ಮಿಣಿ ವಸಂತ್ (Rukmini Vasanth) ಕನ್ನಡದ ಸ್ಟಾರ್ ನಟಿ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳ ಬಳಿಕ ರುಕ್ಮಿಣಿ ವಸಂತ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಈಗಾಗಲೇ ನಟಿಸಿರುವ ರುಕ್ಮಿಣಿ ವಸಂತ್, ಹಿಂದಿ ಸಿನಿಮಾ ಒಂದರ ಬಗ್ಗೆಯೂ ಮಾತುಕತೆ ಮಾಡಿದ್ದರು. ತೆಲುಗಿನ ‘ಅಪ್ಪುಡೊ ಇಪ್ಪುಡೊ ಎಪ್ಪುಡೊ’ ಸಿನಿಮಾನಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್, ಜೂ ಎನ್ಟಿಆರ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ನಡುವೆ ಇದೀಗ ಮತ್ತೊಬ್ಬ ಟಾಲಿವುಡ್ ಸ್ಟಾರ್ ಹೀರೋ ಅವರ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.
ರುಕ್ಮಿಣಿ ವಸಂತ್ ಅವರು ಇದೀಗ ತೆಲುಗು ಚಿತ್ರರಂಗದ ಸ್ಟಾರ್ ನಟ ನಾನಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ರುಕ್ಮಿಣಿ ವಸಂತ್ ಅವರನ್ನು ಸಿನಿಮಾದ ನಾಯಕಿಯಾಗಿ ಖುದ್ದು ನಾನಿ ಅವರೇ ಆಯ್ಕೆ ಮಾಡಿದ್ದಾರೆ. ರುಕ್ಮಿಣಿ ಅವರಿಗೂ ಕತೆ ಇಷ್ಟವಾಗಿದ್ದು, ಈ ಅವಕಾಶದ ಬಗ್ಗೆ ಉತ್ಸುಕರಾಗಿದ್ದಾರೆ. ರುಕ್ಮಿಣಿ ಅವರು ತಮ್ಮ ಅಭಿನಯಕ್ಕಾಗಿ ಗಮನ ಸೆಳೆಯುತ್ತಿದ್ದು, ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕ, ನಿರ್ದೇಶಕರ ಜನಪ್ರಿಯ ಆಯ್ಕೆ ಆಗಿದ್ದಾರೆ. ಅಂದಹಾಗೆ ಈ ಸಿನಿಮಾನಲ್ಲಿ ನಾನಿ ನಾಯಕನಲ್ಲ, ಬದಲಿಗೆ ಮತ್ತೊಬ್ಬರು ನಾಯಕ ಎನ್ನಲಾಗಿದ್ದು, ಆ ನಾಯಕನ ಹುಡುಕಾಟವನ್ನು ಚಿತ್ರತಂಡ ಮುಂದುವರೆಸಿದೆ