ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Sports-Cinema

ಕದ್ರಾದ ಕೆಪಿಸಿ ಕಾಲೋನಿಯ 8 ವಿದ್ಯಾರ್ಥಿಗಳಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್

Pakka News Web • 18 ಆಕ್ಟೋ 2026,

ಕಾರವಾರ: ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಅಖಿಲ ಭಾರತ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಕಾರವಾರದ ಕದ್ರಾ ಕೆಪಿಸಿ ಕಾಲೋನಿಯ ಎಂಟು ವಿದ್ಯಾರ್ಥಿಗಳು ಬ್ಲ್ಯಾಕ್ ಬೆಲ್ಟ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇಂಟರ್‌ನ್ಯಾಷನಲ್ ಜಪಾನ್ ಕರಾಟೆ ಅಸೋಸಿಯೇಷನ್ ಶೊಟೋಕಾನ್ ಇಂಡಿಯಾ (IJKA) ವತಿಯಿಂದ ಆಯೋಜಿಸಿದ್ದ ಪರೀಕ್ಷೆಯಲ್ಲಿ ದೈವಿಕ್, ಅನ್ವಿತ್, ಶ್ರೇಯ್, ಚಿನ್ಮಯಿ, ಸಾಹಿಲ್, ಮನನ್, ಸಿಂಚನಾ ಹಾಗೂ ಇಕ್ರಾ ಅವರು ಬ್ಲ್ಯಾಕ್ ಬೆಲ್ಟ್ ಪಡೆಯುವ ಮೂಲಕ ಕರಾಟೆಯಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ.

ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸೆನ್ಸೆ ಮುರಾದ್ ಶೇಖ್ ಅವರು ಟೋಕಿಯೊ, ಜಪಾನ್‌ನಲ್ಲಿ 4ನೇ ಡಾನ್ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ.

ಸಮಾರಂಭದಲ್ಲಿ ಮಾಜಿ ಶಾಸಕ ಜನಾಬ್ ನಸೀರ್ ಅಹಮದ್ ಹಾಗೂ ಭಾರತದ ಮುಖ್ಯ ಪರೀಕ್ಷಕ ಶಿಹಾನ್ ಮಲಿಕ್ ಶೇಖ್ ಅವರು ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250