ಸೆಪ್ಟೆಂಬರ್ 11, 2026
ಶುಕ್ರವಾರ

ನಮ್ಮನ್ನು ಅನುಸರಿಸಿ

Uttara-Kannada

ಸ್ವರ್ಣವಲ್ಲಿ ಮಠ ಶ್ರೀಗಳ ಚಾತುರ್ಮಾಸ್ಯದಲ್ಲಿ ಅನಂತಮೂರ್ತಿ ಹೆಗಡೆ ಭಾಗಿ

Pakka News Web • 11 ಸೆಪ್ಟೆಂ 2026,

ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಚಾತುರ್ಮಾಸ್ಯ ವೃತಾಚರಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಅನಂತಮೂರ್ತಿ ಹೆಗಡೆ ಅವರು ತಮ್ಮ ಕುಟುಂಬ ಸಮೇತರಾಗಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿದರು.

ಈ ಪವಿತ್ರ ಸಂದರ್ಭದಲ್ಲಿ ಅವರು ಪರಿವಾರದೊಂದಿಗೆ ಶ್ರೀಗಳ ದಿವ್ಯ ಸನ್ನಿಧಿಯಲ್ಲಿ ಪಾದುಕಾ ಪೂಜೆ, ವಿಶೇಷ ಅರ್ಚನೆ ಹಾಗೂ ಷೋಡಶೋಪಚಾರ ಪೂಜೆಗಳನ್ನು ವಿಧಿ-ವಿಧಾನಗಳಂತೆ ನೆರವೇರಿಸಿದರು. ಅಲ್ಲದೆ, ಪೂಜ್ಯ ಗುರುಗಳಿಂದ ಮಂತ್ರಾಕ್ಷತೆ ಹಾಗೂ ದಿವ್ಯ ಆಶೀರ್ವಾದವನ್ನು ಪಡೆದುಕೊಂಡು ಧನ್ಯತಾ ಭಾವ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಅನಂತಮೂರ್ತಿ ಹೆಗಡೆ, ಪೂಜ್ಯ ಗುರುಗಳ ಚಾತುರ್ಮಾಸ್ಯ ವೃತಾಚರಣೆಯಂತಹ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾಗಿರುವುದು ತಮಗೆ ಅಪಾರ ಸಂತೋಷ ಹಾಗೂ ಧನ್ಯತೆಯನ್ನು ತಂದಿದೆ ಎಂದರು. ಅಲ್ಲದೆ, ಗುರುಗಳ ದಿವ್ಯ ಆಶೀರ್ವಾದ ಸದಾ ಕಾಲ ಸಮಸ್ತ ಭಕ್ತ ಜನರ ಮೇಲೆ ಇರಲಿ ಎಂದು ಪ್ರಾರ್ಥಿಸಿದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250