ಅಂಕೋಲಾ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ನಡೆಸಿದ ಸಿ.ಎ (Chartered Accountant) ಅಂತಿಮ ಪರೀಕ್ಷೆಯಲ್ಲಿ ತಾಲ್ಲೂಕಿನ ಬಾಸಗೋಡದ ವೃಷಭ ಬೀರಣ್ಣ ನಾಯಕ ಅವರು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ) ಪದವಿ ಪಡೆದಿದ್ದಾರೆ.
ಇವರು ಬಾಸಗೋಡದ ಬೀರಣ್ಣ ಲಕ್ಷ್ಮಣ ನಾಯಕ ಹಾಗೂ ವಿಜಯಾ ಬೀರಣ್ಣ ನಾಯಕ ದಂಪತಿಗಳ ಪುತ್ರ ಹಾಗೂ ಬಾಸಗೋಡದ ದಿವಂಗತ ಲಕ್ಷ್ಮಣ ತಿಮ್ಮಣ್ಣ ನಾಯಕ ಮತ್ತು ಅಗ್ರಗೋಣದ ಮುದ್ದಣ್ಣ ಮಹಾದೇವ ನಾಯಕ ಅವರ ಮೊಮ್ಮಗನಾಗಿದ್ದಾರೆ.
ಅತ್ಯಂತ ಕಠಿಣವಾದ ಈ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಕಂಡು, ತಮ್ಮ ಕುಟುಂಬ ಹಾಗೂ ಊರಿಗೆ ಕೀರ್ತಿ ತಂದಿರುವ ಸಿ.ಎ ವೃಷಭ ಬೀರಣ್ಣ ನಾಯಕ ಅವರ ಸಾಧನೆಗೆ ಸ್ಥಳೀಯ ಗಣ್ಯರು ಹಾಗೂ ಬಂಧು-ಮಿತ್ರರು ಹರ್ಷ ವ್ಯಕ್ತಪಡಿಸಿದ್ದಾರೆ.
