ಸೆಪ್ಟೆಂಬರ್ 5, 2026
ಶನಿವಾರ

ನಮ್ಮನ್ನು ಅನುಸರಿಸಿ

Uttara-Kannada

ಮಂದ ಬೆಳಕಿನಲ್ಲಿ ಮೊಬೈಲ್ ಟಾರ್ಚ್ ಹಿಡಿದು ಸಚಿವ ಲಕ್ಷ್ಮಣ ಸವದಿ ಭಾಷಣ

Pakka News Web • 15 ಆಗಸ್ಟ್ 2026,

ಕಾರವಾರ:ಧ್ವಜಾರೋಹಣ ನೆರವೇರಿಸಿದ ಬಳಿಕ‌ ಭಾಷಣ ಮಾಡಲು ಮುಂದಾದ ಜಿಲ್ಲಾ ಉಸ್ತುವಾರಿ ಸಚಿವರು ಮಂದ ಬೆಳಕಿನಲ್ಲಿ ಮೊಬೈಲ್ ಟಾರ್ಚ್ ಹಿಡಿದು ಕೆಲ ವೇಳೆ ಭಾಷಣ ಮಾಡಿದರು.

ನಗರದ ಕಾಜುಭಾಗದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ 80ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದಿಂದ ಗೌರವ ವಂದನೆ ಸ್ವೀಕರಿಸಿದರು.

ಕಾರ್ಯಕ್ರಮದ ವೇಳೆ ಮೋಡ ಕವಿದ ವಾತಾವರಣವಿದ್ದುದರಿಂದ ಮೈದಾನದಲ್ಲಿ ನೈಸರ್ಗಿಕ ಬೆಳಕಿನ ಕೊರತೆ ಎದುರಾಯಿತು. ಆದರೆ, ವೇದಿಕೆಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡದ ಕಾರಣ ಸಚಿವರು ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣವನ್ನು ಓದಲು ಸೂಕ್ತ ಬೆಳಕು ಇಲ್ಲದಂತಾಗಿತ್ತು.

ಅನಿವಾರ್ಯವಾಗಿ ಮೊಬೈಲ್ ಫೋನ್‌ನ ಟಾರ್ಚ್ ಬೆಳಕಿನಲ್ಲೇ ಸಚಿವರು ತಮ್ಮ ಭಾಷಣ ಮಾಡಲು‌ ಆರಂಭಿಸಿದರು. ಇಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250
ಪ್ರಚಾರ M48
ಜಾಹೀರಾತು ಸ್ಥಳ ಲಭ್ಯವಿದೆ
336x280