ಸೆಪ್ಟೆಂಬರ್ 11, 2026
ಶುಕ್ರವಾರ

ನಮ್ಮನ್ನು ಅನುಸರಿಸಿ

Uttara-Kannada

ನೋಟಿಸ್‌ಗಳ ವಿಚಾರಣೆಗೆ ಕುಟುಂಬದವರು ಹಾಜರಾಗಲು ಅವಕಾಶ!

Pakka News Web • 11 ಸೆಪ್ಟೆಂ 2026,

ಕಾರವಾರ:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ಹಿರಿಯ ನಾಗರಿಕರು, ವಿಶೇಷ ಚೇತನರು, ಅನಾರೋಗ್ಯ ಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರಿಗೆ ಜಾರಿ ಮಾಡಲಾಗಿರುವ ನೋಟಿಸ್‌ಗಳ ವಿಲೇವಾರಿಗಾಗಿ, ಸಂಬಂಧಪಟ್ಟ ಮತದಾರರ ಪರವಾಗಿ ಅವರ ಕುಟುಂಬದ ವಯಸ್ಕ ಸದಸ್ಯರು ವಿಚಾರಣೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ಅಂತಹ ಮತದಾರರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಖುದ್ದು ಹಾಜರಾಗಿ ಅಗತ್ಯ ದಾಖಲೆಗಳು ಹಾಗೂ ಸೂಕ್ತ ಮಾಹಿತಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250