ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಗಾಯಗೊಂಡ ಹಸುವಿನ ರಕ್ಷಣೆ ಮಾಡಿದ ರಾಜೇಶ್ ಬಾಡಕರ

Pakka News Web • 20 ಸೆಪ್ಟೆಂ 2026,

ಕಾರವಾರ: ನಗರದ ಸಂಕ್ರಿವಾಡ ಪ್ರದೇಶವೊಂದರಲ್ಲಿ ಕಾಲಿಗೆ ಗಂಭೀರ ಗಾಯವಾಗಿ, ಗಾಯದಲ್ಲಿ ಹುಳಗಳು ಬಿದ್ದು ನರಳುತ್ತಿದ್ದ ಹಸುವೊಂದನ್ನು ಸಮಾಜಸೇವಕ ಹಾಗೂ ಜನಶಕ್ತಿ ವೇದಿಕೆಯ ಸದಸ್ಯ ರಾಜೇಶ್ ಬಾಡಕರ ಅವರು ರಕ್ಷಿಸಿ, ಸೂಕ್ತ ಚಿಕಿತ್ಸೆ ಕೊಡಿಸಿ ಗೋಶಾಲೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಾರವಾರ ನಗರದ ಸಂಕ್ರಿವಾಡ ಪ್ರದೇಶದಲ್ಲಿ ಗಾಯಗೊಂಡ ಹಸು ನೋವಿನಿಂದ ನರಳುತ್ತಿರುವ ಕುರಿತು ಮಾಹಿತಿ ತಿಳಿದ ತಕ್ಷಣ ರಾಜೇಶ್ ಅವರು ತಮ್ಮ ಮಿತ್ರ ಸಂಜಯ್ ನಾಗೇಕರ್ ರೊಂದಿಗೆ ಸ್ಥಳಕ್ಕೆ ಧಾವಿಸಿದರು. ಹಸುವಿನ ಕಾಲಿಗೆ ಗಾಯವಾಗಿದ್ದು, ಗಾಯದಲ್ಲಿ ಹುಳಗಳು ಬಿದ್ದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರು ತಕ್ಷಣವೇ ಅಗತ್ಯ ನೆರವು ಒದಗಿಸುವ ಕಾರ್ಯಕ್ಕೆ ಮುಂದಾದರು. ನಂತರ ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹಸುವಿಗೆ ಅಗತ್ಯ ಚಿಕಿತ್ಸೆಯನ್ನು ನೀಡಿದರು. ಗಾಯದಲ್ಲಿದ್ದ ಹುಳಗಳನ್ನು ತೆಗೆದು ಸ್ವಚ್ಛಗೊಳಿಸಿ, ಹಸುವಿನ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ಬಳಿಕ ಹಸುವನ್ನು ಮತ್ತೆ ಅದೇ ಸ್ಥಳದಲ್ಲಿ ಬಿಟ್ಟುಬಿಡದೆ, ಸುರಕ್ಷಿತ ಆರೈಕೆಯ ಅಗತ್ಯವಿರುವುದನ್ನು ಮನಗಂಡ ರಾಜೇಶ್ ಅವರು ತಮ್ಮ ಸ್ವಂತ ವ್ಯವಸ್ಥೆಯಲ್ಲಿ ವಾಹನದ ಮೂಲಕ ಸಮೀಪದಲ್ಲಿರುವ ಹಿರೇಶಿಟ್ಟ ದಲ್ಲಿರುವ ಗುರುಕುಲದ ಗೋಶಾಲೆಗೆ ಕರೆದೊಯ್ದು ದಾಖಲಿಸಿದರು. ಗೋಶಾಲೆಯಲ್ಲಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿಯೊಂದು ನೋವಿನಿಂದ ನರಳುತ್ತಿರುವುದನ್ನು ಕಂಡು ನಿರ್ಲಕ್ಷ್ಯ ಮಾಡದೆ, ತಕ್ಷಣ ಸ್ಪಂದಿಸಿ ಪಶು ವೈದ್ಯಕೀಯ ಸಿಬ್ಬಂದಿಯ ಸಹಕಾರ ಪಡೆದು ಚಿಕಿತ್ಸೆ ಕೊಡಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರುವ ರಾಜೇಶ್ ಬಾಡ್ಕರ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಾತು ಬಾರದ ಜೀವಿಯ ನೋವಿಗೆ ಸ್ಪಂದಿಸುವುದು ಕೂಡ ನಮ್ಮ ಸಾಮಾಜಿಕ ಜವಾಬ್ದಾರಿ. ಸಾಧ್ಯವಾದಷ್ಟು ಇಂತಹ ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು ಎಂಬ ಸಂದೇಶದೊಂದಿಗೆ ರಾಜೇಶ್ ಬಾಡಕರ ಅವರ ಕಾರ್ಯ ಸಾರ್ವಜನಿಕರ ಗಮನ ಸೆಳೆದಿದೆ


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250