ಅಕ್ಟೋಬರ್ 28, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ಪಾಲಕರ ಪತ್ತೆಗಾಗಿ ಮನವಿ!

Pakka News Web • 29 ಸೆಪ್ಟೆಂ 2026,

ಕಾರವಾರ:ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ, ಅಂದಾಜು 17 ವರ್ಷ ವಯಸ್ಸಿನ ಸಾಹಿಲ್ ಎಂಬ ಬಾಲಕನು ತನ್ನ ಯಾವುದೇ ಸರಿಯಾದ ಮಾಹಿತಿಯನ್ನು ನೀಡಲು ಅಶಕ್ತನಾಗಿದ್ದಾನೆ. ಈತನ ಪಾಲಕರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ದೊರಕಿಲ್ಲ.
ಬಾಲಕನನ್ನು ಶಿರಸಿಯ ಪಂಡಿತ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮನೋಶಾಸ್ತ್ರಜ್ಞರ ಬಳಿ ಪರೀಕ್ಷೆಗೆ ಒಳಪಡಿಸಿದಾಗ, ಈತ ಬುದ್ಧಿಮಾಂದ್ಯನಾಗಿದ್ದು, ವಿಶೇಷ ಆರೈಕೆ ಹಾಗೂ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿರುತ್ತಾರೆ.
ಹೀಗಾಗಿ, ಬಾಲಕನ ಪೋಷಣೆ ಮತ್ತು ರಕ್ಷಣೆಯ ಹಿತದೃಷ್ಟಿಯಿಂದ ಮುಂದಿನ ಕ್ರಮವಾಗಿ ಬಳ್ಳಾರಿಯ ಬುದ್ಧಿಮಾಂದ್ಯ ಮಕ್ಕಳ ಆರೈಕೆಯ ವಸತಿ ನಿಲಯಕ್ಕೆ ದಾಖಲಿಸಲಾಗಿದೆ ಹಾಗೂ ಬಳ್ಳಾರಿಯ ಮಕ್ಕಳ ಕಲ್ಯಾಣ ಸಮಿತಿಯ ಮೇಲ್ವಿಚಾರಣೆಗೆ ಒಳಪಡಿಸಲಾಗಿದೆ.
ಬಾಲಕನ ಭವಿಷ್ಯದ ಹಿತದೃಷ್ಟಿಯಿಂದ ಆತನನ್ನು ‘ದತ್ತಕಕ್ಕೆ ಮುಕ್ತ’ಗೊಳಿಸುವುದು ಅವಶ್ಯವಿದ್ದರೂ, ಜೈವಿಕ ಪಾಲಕರ ಕುರಿತು ಸಮಿತಿಗೆ ಯಾವುದೇ ಪೂರಕ ದಾಖಲೆಗಳು ಲಭ್ಯವಿಲ್ಲ. ಮಗುವಿನ ಭವಿಷ್ಯವನ್ನು ರೂಪಿಸಲು ಜೈವಿಕ ಪಾಲಕರ ಪತ್ತೆ ಅತಿಮುಖ್ಯವಾಗಿರುವುದರಿಂದ, ಸಂಬಂಧಪಟ್ಟ ಪಾಲಕರು ಕೂಡಲೇ ಮಕ್ಕಳ ಕಲ್ಯಾಣ ಸಮಿತಿ-02, ಬಾಲಕರ ಬಾಲಮಂದಿರ, ಕೋರ್ಟ್ ರಸ್ತೆ, ಶಿರಸಿ ಇಲ್ಲಿಗೆ ಹಾಜರಾಗುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250