ಕಾರವಾರ, ಅ.28: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಎಲ್ಲಾ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿಕೆಯಾಗಿರುವ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದ್ದು, ಅದರಂತೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) 2026-27ನೇ ಸಾಲಿನಲ್ಲಿ ಒಟ್ಟು 100 ಬಿ.ಎಸ್ಸಿ ನರ್ಸಿಂಗ್ ಸೀಟ್ಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಕೃತ ಅನುಮತಿ ದೊರೆತಿದೆ.
ಈ ಸೀಟುಗಳ ಪ್ರವೇಶಾತಿಗಾಗಿ ಅಕ್ಟೋಬರ್ 30ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 5 ಗಂಟೆಯವರೆಗೆ ಮೆಡಿಕಲ್ ಕಾಲೇಜಿನ ಬೋಧನಾ ಕೊಠಡಿ-2ರಲ್ಲಿ ‘ವಾಕ್ ಇನ್ ಅಡ್ಮಿಷನ್’ (Walk-in Admission) ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (KEA) ಈಗಾಗಲೇ ನೋಂದಾಯಿಸಿಕೊಂಡಿರುವ ಅರ್ಹ ಅಭ್ಯರ್ಥಿಗಳನ್ನು ಕೇವಲ ಮೆರಿಟ್ (ವೈಯಕ್ತಿಕ ಅರ್ಹತೆ) ಆಧಾರದ ಮೇಲೆ ನೇರವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಬಯಸುವ ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್ಸೈಟ್ https://krimskarwar.karnataka.gov.in ಅನ್ನು ಸಂಪರ್ಕಿಸುವಂತೆ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎಸ್ಸಿ ನರ್ಸಿಂಗ್ ಪ್ರವೇಶಾತಿಗೆ ಅ.30ರಂದು ವಾಕ್ ಇನ್ ಅಡ್ಮಿಷನ್!
