ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಜಿಲ್ಲಾಧಿಕಾರಿಯಿಂದ ಗಣಪನಿಗೆ ವಿಶೇಷ ಪೂಜೆ!

Pakka News Web • 17 ಸೆಪ್ಟೆಂ 2026,

ಕಾರವಾರ: ಗಣೇಶೋತ್ಸವದ ಅಂಗವಾಗಿ ಕಾರವಾರ ತಾಲೂಕಿನ ಬಾಡ ಗ್ರಾಮ ಚಾವಡಿಯಲ್ಲಿ  ಶ್ರೀ ಮಹಾಗಣಪತಿಯ ಮಹಾಪೂಜೆ ಭಕ್ತಿಭಾವ ಹಾಗೂ ಸಡಗರದಿಂದ ನೆರವೇರಿತು.

ಮಹಾಪೂಜೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡು ಶ್ರೀ ಮಹಾಗಣಪತಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾದರು.

ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನಾ, ಉಪ ತಹಶೀಲ್ದಾರರಾದ ಶ್ರೀಧರ್ ನಾಯ್ಕ್ ಹಾಗೂ ಶಶಿ ರಾಣೆ, ಪ್ರಮೋದ್ ನಾಯ್ಕ್, ಕಂದಾಯ ನಿರೀಕ್ಷಕ ಪ್ರಶಾಂತ್ ನಾಯ್ಕ್, ಗ್ರಾಮ ಆಡಳಿತಾಧಿಕಾರಿ ಕೊಟ್ರಸಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಇದರೊಂದಿಗೆ ನಿವೃತ್ತ ಕಂದಾಯ ನಿರೀಕ್ಷಕ ಆರ್.ಎಸ್. ನಾಯ್ಕ್, ನಿವೃತ್ತ ಆಹಾರ ಶಿರಸ್ತೇದಾರ್ ಶಿವಾನಂದ ನಾಯ್ಕ್ ಹಾಗೂ ದೀಪಕ್ ನಾಯ್ಕ್, ರೂಪೇಶ್ ಏಕನಾಥ್, ನಾಗರಾಜ ಗೌಡ, ಸಂತೋಷ ಬಾಂಡೇಕರ್, ಮಹೇಂದ್ರ ಗೌಡ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಮಹಾಪೂಜೆಯ ಬಳಿಕ ಭಕ್ತರಿಗೆ ಶ್ರೀ ಮಹಾಗಣಪತಿಯ ಮಹಾಪ್ರಸಾದ ವಿತರಿಸಲಾಯಿತು. ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಒಟ್ಟಾಗಿ ಗಣೇಶೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ಬಾಡ ಗ್ರಾಮ ಚಾವಡಿಯಲ್ಲಿ ಹಬ್ಬದ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250